Tuesday, August 2, 2016

ರೈತ ಪ್ರಶಸ್ತಿ ನೀಡಲು ಪುರುಷ ಮತ್ತು ಮಹಿಳಾ ರೈತರಿಂದ ಅರ್ಜಿ ಆಹ್ವಾನ


ಹಾಸನ, ಆಗಸ್ಟ್ 2- ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯವು ನವಂಬರ್ 2016 ತಿಂಗಳಲ್ಲಿ ಕೃಷಿ ಮೇಳವನ್ನು ಆಯೋಜಿಸಲಿದ್ದು, ಈ ಸಂದರ್ಭದಲ್ಲಿ ಕೆಳಕಂಡ ಕೃಷಿ ಪ್ರಶಸ್ತಿಗಳನ್ನು ನೀಡುತ್ತಿದ್ದು, ಈ ಪ್ರಶಸ್ತಿಗಳಿಗಾಗಿ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ಡಾ. ಎಂ.ಹೆಚ್.ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ದಿವಂಗತ ಸಿ ಬೈರೆಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ.ಕೆನರಾ ಬ್ಯಾಂಕ್ ಅತ್ಯುತ್ತಮ ಕೃಷಿಕ ಪ್ರಶಸ್ತಿ (ಸಮಗ್ರ ಕೃಷಿಯಲ್ಲಿ ತೊಡಗಿರುವವರಿಗೆ). ಡಾ. ಆರ್ ದ್ವಾರಕಿನಾಥ ಅತ್ಯುತ್ತಮ ರೈತ ಪ್ರಶಸ್ತಿ
ಈ ಸಂಬಂಧ ಅರ್ಜಿಗಳನ್ನು ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪಶು ಸಂಗೊಪನಾ ಇಲಾಖೆಗಳಲ್ಲಿ ದೊರೆಯುತ್ತದೆ ಹಾಗೂ ವಿಶ್ವ ವಿದ್ಯಾಲಯದ ವೆಬ್ ಸೈಟ್ಟಿwww.uasbangalore.edu.in ಲ್ಲಿ ದೊರೆಯುತ್ತದೆ. ಆಸಕ್ತ ರೈತ ಭಾಂಧವರು ತುಂಬಿದ ಅರ್ಜಿಯನ್ನು ಕೊನೆಯ ದಿನಾಂಕದೊಳಗೆ (29.09.2016) ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಾಸನ ಅಥವಾ ಕಾರ್ಯಕ್ರಮ ಸಂಯೋಜಕರು, ಕೃಷಿ ವಿಜ್ಞಾನ ಕೇಂದ್ರ, ಕಂದಲಿಗೆ ಹಿಂದಿರುಗಿಸಲು ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ- 08172 256092

No comments:

Post a Comment