ಹಾಸನ, ಆಗಸ್ಟ್ 2- 2015-16ನೇ ಸಾಲಿನ ಮೆಟ್ರಿಕ್ ನಂತರದ ಕೋರ್ಸ್‍ಗಳ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ, ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪ.ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮಂಜೂರು ಮಾಡಲು ಅವಕಾಶವಿದೆ. ಅದೇ ರೀತಿ 2015-16ನೇ ಶೈಕ್ಷಣಿಕ ಸಾಲಿನ ಮೆಟ್ರಿಕ್ ನಂತರದ ಕೋರ್ಸ್‍ಗಳ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ.ಜಾತಿ/ಪ.ವರ್ಗದ ವಿದ್ಯಾರ್ಥಿಗಳಿಗೆ ಈ ಕೆಳಕಂಡಂತೆ ಪ್ರೋತ್ಸಾಹ ಧನವನ್ನು ಇಲಾಖಾವತಿಯಿಂದ ಮಂಜೂರು ಮಾಡಬಹುದಾಗಿದ್ದು, ಅರ್ಹ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿಸಲ್ಲಿಸಬೇಕಾದ ಆನ್‍ಲೈನ್ ವೆನ್‍ಸೈಟ್ ವಿಳಾಸ: ತಿತಿತಿ. sತಿ.ಞಚಿಡಿ.ಟಿiಛಿ.iಟಿ ಎಂದು ಹಾಸನದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪುರುಷೋತ್ತಮ್ ತಿಳಿಸಿದ್ದಾರೆ.
2016-17 ನೇ ಸಾಲಿನ ಆಯವ್ಯಯದಲ್ಲಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ ಕೋರ್ಸುಗಳ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗೆ ರೂ 20,000/- ಪ್ರೋತ್ಸಾಹ ಧನ ನೀಡಲಾಗುವುದು.
2016-17 ನೇ ಸಾಲಿನ ಆಯವ್ಯಯದ ಘೋಷಣೆಯಂತೆ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‍ಗಳು: ಎಂ.ಎ./ಎಂ.ಕಾಂ/ಎಂ.ಎಸ್ಸಿ/ಎಂಬಿಎ/ಎಂ.ಸಿಎ, ಎಲ್.ಎಲ್.ಎಂ. (ಕಾನೂನು), ಎಂಇ/ಎಂಟೆಕ್ (ತಾಂತ್ರಿಕ), ಎಂಡಿ/ಎಂಎಸ್/ಎಂಡಿಎಸ್ (ವೃದ್ಯಕೀಯ), ಎಂಎಸ್ಸಿ-ಅಗ್ರಿ/ತೋಟಗಾರಿಕೆ/ರೇಷ್ಮೆ/ಮೀನುಗಾರಿಗೆ, ಎಂಎಸಿ(ಪಶುಸಂಗೋಪನೆ), ಇತರೆ ಸ್ನಾತಕೋತ್ತರ ಕೋರ್ಸುಗಳು (ವಿಶ್ವವಿದ್ಯಾಲಯಗಳು ಅಂಗೀಕರಿಸುವ ಇತರೆ ಸ್ನಾತಕೋತ್ತರ ಕೋರ್ಸುಗಳಲ್ಲಿ - 1 ರಿಂದ 5 ರ್ಯಾಂಕ್ ಪಡೆದ ಪರಿಶಿಷ್ಟ ಜಾತಿಯ ಪ್ರತಿ ವಿದ್ಯಾರ್ಥಿಗೆ ರೂ 50,000/- ಪ್ರೋತ್ಸಾಹ ಧನ ನೀಡಲಾಗುವುದು.
2016-17 ನೇ ಸಾಲಿನ ಆಯವ್ಯಯದ ಘೋಷಣೆಯಂತೆ ಸಿಎ/ಐಸಿಡಬ್ಲ್ಯೂಎ/ಕಂಪನಿ ಸೆಕ್ರೆಟರಿ ವೃತ್ತಿಪರ ಕೋರ್ಸುಗಳಲ್ಲಿ ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಿ.ಎ.(ಇನ್ಸ್‍ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಕೋರ್ಸು)ಪ್ರತಿ ವಿದ್ಯಾರ್ಥಿಗೆ ರೂ 50,000/- ಪ್ರೋತ್ಸಾಹ ಧನ ಮತ್ತು ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿ ವಿದ್ಯಾರ್ಥಿಗೆ ರೂ 1,00,000/- ಪ್ರೋತ್ಸಾಹಧನ ಮಂಜೂರು ಮಾಡಲಾಗುವುದು.
2016-17 ನೇ ಸಾಲಿನ ಆಯವ್ಯಯದ ಘೋಷಣೆಯಂತೆ ಸಿಎ/ಐಸಿಡಬ್ಲ್ಯೂಎ/ಕಂಪನಿ ಸೆಕ್ರೆಟರಿ ವೃತ್ತಿಪರ ಕೋರ್ಸುಗಳಲ್ಲಿ ಐ.ಸಿ.ಡಬ್ಲ್ಯೂ.ಎ(ಇನ್ಸ್‍ಟಿಟ್ಯೂಟ್ ಆಫ್ ಕಾಸ್ಟ್ ವಕ್ರ್ಸ್ ಅಕೌಂಟ್ಸ್ ಕೋರ್ಸ್, ಕೋಲ್ಕತ್ತ) ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿ ವಿದ್ಯಾರ್ಥಿಗೆ ರೂ 50,000/- ಪ್ರೋತ್ಸಾಹ ಧನ ಮತ್ತು ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿ ವಿದ್ಯಾರ್ಥಿಗೆ ರೂ 1,00,000/- ಪ್ರೋತ್ಸಾಹಧನ ಮಂಜೂರು ಮಾಡಲಾಗುವುದು. ಹಾಗೂ ಕಂಪನಿ ಸೆಕ್ರೆಟರಿ (ಇನ್ಸ್‍ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಕೋರ್ಸು) ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿ ವಿದ್ಯಾರ್ಥಿಗೆ ರೂ 50,000/- ಪ್ರೋತ್ಸಾಹ ಧನ ಮತ್ತು ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿ ವಿದ್ಯಾರ್ಥಿಗೆ ರೂ 1,00,000/- ಪ್ರೋತ್ಸಾಹಧನ ಮಂಜೂರು ಮಾಡಲಾಗುವುದು.
No comments:
Post a Comment