Tuesday, August 2, 2016

ಪಡಿತರ ಚೀಟಿದಾರರಿಗೆ ವಿಶೇಷ ಸೂಚನೆ


ಹಾಸನ, ಆಗಸ್ಟ್ 2-ಪಿ.ಬಿ.ಸಿ ಸೆಂಟರ್‍ನಲ್ಲಿ ಪಡಿತರ ಚೀಟಿ ನೀಡಿ ಬಾರ್‍ಕೋಡ್ ಕೂಪನ್ ಉಚಿತವಾಗಿ ಪಡೆದು ನ್ಯಾಯಬೆಲೆ ಅಂಗಡಿಗೆ ನೀಡಿ ಆಹಾರಧಾನ್ಯ ಮತ್ತು ಸೀಮೆಎಣ್ಣೆ ಪಡೆಯಬಹುದು.
ತಪ್ಪಿದ್ದಲ್ಲಿ,
ಪಡಿತರ ಚೀಟಿದಾರರು ಮೊಬೈಲ್ ಬಳಸಿ ಐ.ವಿ.ಆರ್.ಎಸ್ ಮೂಲಕ ಸರಳವಾಗಿ ಕೂಪನ್ ಪಡೆಯುವ ವ್ಯವಸ್ಥೆ ಜಾರಿಯಲ್ಲಿದೆ. ಈ ವ್ಯವಸ್ಥೆಯನ್ನು ಆಧಾರ್‍ನೊಂದಿಗೆ ನೋಂದಾವಣೆಯಾಗಿರುವ ಪಡಿತರ ಚೀಟಿ ಸದಸ್ಯರ ಮೊಬೈಲ್ ಮೂಲಕ ಮಾತ್ರ ಬಳಸಬಹುದಾಗಿದೆ. ಆಧಾರ್‍ನೊಂದಿಗೆ ನೊಂದಾವಣೆಯಾಗಿರುವ ಮೊಬೈಲ್ ಮೂಲಕ 161 ಗೆ ಕರೆ ಮಾಡಿ ಸಂಪರ್ಕ ಹೊಂದಿದ ನಂತರ 4 ಒತ್ತಿ, ನಂತರ ಆಧಾರ್‍ನ 12 ಅಂಕಿಗಳನ್ನು ಒತ್ತಬೇಕು.ಇದರಿಂದ ಪಡಿತರ ಚೀಟಿದಾರರಿಗೆ ಕೂಪನ್‍ಕೋಡ್ ಎಸ್.ಎಂ.ಎಸ್ ಮೂಲಕ ತಕ್ಷಣವೇ ಲಭ್ಯವಾಗಲಿದೆ. ಲಭ್ಯವಾದ ಕೂಪನ್ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತೋರಿಸಿ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಪಡೆಯಬಹುದು.
ನೀವು ನೀಡಿದ ವಿವರ ತಪ್ಪಾಗಿದ್ದಲ್ಲಿ, ನಿಮ್ಮ ಕೂಪನ್ ನಿರ್ಮಿಸಲು ಸಾಧ್ಯವಾಗುವುದಿಲ್ಲ ಎಂದು ಎಸ್.ಎಂ.ಎಸ್. ಬರಲಿದೆ. ಎಂದು ಹಾಸನದ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಡಾ:ಎಸ್.ಇ. ಮಹದೇವಪ್ಪ ತಿಳಿಸಿದ್ದಾರೆ.

No comments:

Post a Comment