Sunday, July 31, 2016

ಮನೆ ಮನೆ ಕವಿಗೋಷ್ಠಿಯ ಸ್ಥಳ ಬದಲಾವಣೆ

ಹಾಸನ : ಈ ಮುಂಚೆ ಕನ್ನಡ ಸಾಹಿತ್ಯ ಭವನದಲ್ಲಿ ನಿಗದಿಯಾಗಿದ್ದ ಚಂದ್ರಕಾಂತ ವಡ್ಡುರವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕಾರಣಾಂತರಗಳಿಂದ ರದ್ದಾಗಿರುವುದರಿಂದ ಆಗಸ್ಟ್ 7 ಭಾನುವಾರ ಸಾಯಂಕಾಲ 04.30 ಕ್ಕೆ ನಗರದ ಆರ್.ಸಿ.ರಸ್ತೆಯಲ್ಲಿರುವ ಹಾಡ್ಲಹಳ್ಳಿ ಪಬ್ಲಿಕೇಶನ್ ಆವರಣದಲ್ಲಿ ಸುಜಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜುಲ್ಫಿಕರ್ ಅಹಮದ್ ಅವರ ಪ್ರಾಯೋಜಕತ್ವದಲ್ಲಿ 233 ನೇ ಮನೆ ಮನೆ ಕವಿಗೋಷ್ಠಿ ನಡೆಯಲಿದೆ.
ಮೊದಲಿಗೆ ಕಲಾಸಿರಿ ನಾಟಕ ಶಾಲೆಯ ಅಧ್ಯಕ್ಷರು ಹಾಗೂ ಕವಿಗಳಾದ ಜಯಶಂಕರ್ ಬೆಳಗುಂಬರವರು ರಾಜ್ಯ ಅಂಬೇಡ್ಕರ್ ಯುವಸೇನೆಯ ಕಾರ್ಯಾಧ್ಯಕ್ಷರಾದ ಹೆತ್ತೂರು ನಾಗರಾಜ್‍ರವರ “ಜಾಡಮಾಲಿಯ ಜಗತ್ತು” ಕೃತಿಯನ್ನು ಪರಿಚಯ ಮಾಡಿಕೊಡಲಿದ್ದಾರೆ. ನಂತರ ಜಿಲ್ಲೆಯ ಕವಿ-ಕವಿಯತ್ರಿಯರಿಂದ ಕಾವ್ಯ ವಾಚನ ನಡೆಯಲಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿಯ ಸಂಚಾಲಕರಾದ ಕೊಟ್ರೇಶ್ ಎಸ್.ಉಪ್ಪಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಚಾಲಕರು - 9483470794, ಪ್ರಾಯೋಜಕರು - 9902364781 ಸಂಪರ್ಕಿಸಬಹುದಾಗಿದೆ.

No comments:

Post a Comment