Monday, August 1, 2016

ಮಗನ ಪಾರ್ಥೀವ ಶರೀರದೊಂದಿಗೆ ಕೆಂಪೇಗೌಡ ಏರ್ಪೋರ್ಟ್ ಗೆ ಸಿಎಂ ಆಗಮನ

ಬೆಂಗಳೂರು. ಆ.01 : ಬಹು ಅಂಗಾಂಗ ವೈಫಲ್ಯದಿಂದ ಬೆಲ್ಜಿಯಂನಲ್ಲಿ ನಿಧನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥೀವ ಶರೀರ ಆಗಮಿಸಿದೆ. ವಿಮಾನ ಏರ್ಪೋರ್ಟ್ ಗೆ ಬಂದಿಳಿಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಿಎಂ ಆಪ್ತರು, ಸಚಿವರು ಸಿಎಂ ಸಿದ್ದರಾಮಯ್ಯನವರನ್ನು ಸಮಾಧಾನಪಡಿಸುತ್ತಿದ್ದರು. ಮಗನ ಶರೀರವನ್ನು ತೋರಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೌನಕ್ಕೆ ಶರಣಾಗಿದ್ದರು.  ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರು ರಾಕೇಶ್ ಪಾರ್ಥೀವ ಶರೀರದೊಂದಿಗೆ ಆಗಮಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯ, ಚಾಮರಾಜಪೇಟೆ ಜೆಡಿಎಸ್ ಶಾಸಕ ಬಿ ಝಡ್ ಜಮೀರ್ ಅಹ್ಮದ್ ಖಾನ್ ಹಾಗೂ ಶಾಸಕ ಚೆಲುವರಾಯ ಸ್ವಾಮಿ, ಅಖಂಡ ಶ್ರೀನಿವಾಸ ಮೂರ್ತಿ ಉಪಸ್ಥಿತರಿದ್ದರು.

 ಕೆಲ ಹೊತ್ತಿನಲ್ಲಿ ವಿಶೇಷ ವಿಮಾನದ ಮೂಲಕ ರಾಕೇಶ್ ಮೃತದೇಹವನ್ನು ಮೈಸೂರಿಗೆ ರವಾನಿಸಲಾಗುತ್ತಿದ್ದು, ಅಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

> ರಾಕೇಶ್ ಮೃತದೇಹವನ್ನು ವಿಶೇಷ ವಿಮಾನಕ್ಕೆ ವರ್ಗಾಯಿಸುತ್ತಿರುವ ಸಿಬ್ಬಂಧಿಗಳು

> 10.30ಕ್ಕೆ ಮೈಸೂರಿಗೆ ಆಗಮಿಸುವ ಪಾರ್ಥೀವ ಶರೀರವನ್ನು ನೇರವಾಗಿ ಮೈಸೂರಿನ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣಕ್ಕೆ ತೆಗೆದುಕೊಂಡು ಬರಲಾಗುತ್ತದೆ. ಬಳಿಕ ಅಲ್ಲಿ ಮಧ್ಯಾಹ್ನ 1.30ರವರೆಗೆ ಸಾರ್ವಜನಿಕ ದರ್ಶನಕ್ಕೆ ಇಟ್ಟು ಬಳಿಕ ಟಿ.ಕಾಟೂರಿನಲ್ಲಿರುವ ಫಾರಂ ಹೌಸ್ ನಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ

> ಮಧ್ಯಾಹ್ನ 3 ಗಂಟೆಗೆ ಅಂತಿಮ ಸಂಸ್ಕಾರ

> ಕುರುಬರ ಸಂಪ್ರದಾಯದಂತೆ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ

> ರಾಕೇಶ್ ಅಂತಿಮ ದರ್ಶನಕ್ಕಾಗಿ ಕಾದುನಿಂದ ಸಾರ್ವಜನಿಕರು

No comments:

Post a Comment