ಹಾಸನ, ಆಗಸ್ಟ್ 1- ನಗರದ ವಿಭಜಿತ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಪ್ ಕ್ವಾಂಟಾ ಅಂತರಾಷ್ಟ್ರೀಯ ಹುಲಿಯ ದಿನಾಚಾರಣೆಯನ್ನು ಆಚರಿಸಿತು.
ಸಂಪನ್ಮೂಲ ವ್ಯಕ್ತಿಯಾಗಿ ಬೇಲೂರು ವಲಯ ಅರಣ್ಯಾಧಿಕಾರಿ ಗಿರೀಶ್‍ರವರು ಹುಲಿಗಳ ಅಳಿವು ಉಳಿವಿನ ಬಗ್ಗೆ ಮಾತಾನಾಡುತ್ತಾ ಹುಲಿ ತನ್ನದೇ ಆದ ಆವಾಸವನ್ನು ಹೊಂದಿರುತ್ತದೆ ಪ್ರತಿ ಹುಲಿಯನ್ನು ಅದರ ಮೇಲಿನ ಕಪ್ಪು ಪಟ್ಟೆಗಳ ಮೂಲಕ ಗುರುತಿಸಬಹುದಾಗಿರುತ್ತದೆ. ಅದು ಮೂರರಿಂದ ಐದು ಮರಿಯನ್ನು ಹಾಕುತ್ತದೆ ಹಾಗೂ ಕಾಡಿನ ಹುಲಿಯ 12 ರಿಂದ 15 ವರ್ಷಗಳೂ ಮೃಗಾಲಯದ ಹುಲಿಗಳು 15 ರಿಂದ 20 ವರ್ಷಗಳವರಗೆ ಜೀವಿಸಬಲ್ಲವಾಗಿರುತ್ತದೆ. ಒಂದು ಕಾಡಿನಲ್ಲಿ ಹುಲಿಗಳಿವೆ ಎಂದರೆ ಅದು ಜೈವಿಕ ಸಮತೋಲನ ಹೊಂದಿರುವ ಪರಿಸರ ಎಂದು ಭಾವಿಸಬಹುದಾಗಿದೆ. ಅವುಗಳು ಇಂದು ವಿನಾಶದ ಅಂಚಿಗೆ ತಲಪಿದ್ದು ನಾವೆಲ್ಲರು ಅಳಿವಿನಂಚಿನ ಈ ಅಮೂಲ್ಯ ಪ್ರಾಣಿಯನ್ನು ಮುಂದಿನ ಪೀಳಿಗೆಗೆ ಉಳಿಸಿದರೆ ಪರಿಸರ ಸಮತೋಲನ ಹೊಂದಿ ಮನುಕುಲಕ್ಕೆ ಮುಂದೆ ಬಂದೊದಗಬಹುದಾದ ದುರಂತಗಳ ಸರಮಾಲೆಯನ್ನು ತಪ್ಪಿಸಬಹುದಾಗಿದೆ. ಹಾಗಾಗಿ ಈ ನಿಟ್ಟಿನಲ್ಲಿ ನಮ್ಮ ಮೇಲೆ ಬಹು ದೊಡ್ಡ ಜವಾಬ್ದಾರಿಯಿದೆ, ಎಂದು ಹೇಳಿದರು.ಈ ಸಂದರ್ಭದಲ್ಲಿ ಉಲ್ಲಾಸ ಕಾರಂತರ ಹುಲಿ ಬಗ್ಗೆಯ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ಉಪನ್ಯಾಸಕರಾದ ಶೇಖರಶೆಟ್ಟಿ ವಹಿಸಿದ್ದರು. ರೋಟರಿ ಕ್ವಾಂಟಾದ ಅಧ್ಯಕ್ಷರಾದ ಬಿ.ಡಿ. ಶಂಕರೇಗೌಡ ಹಾಗೂ ರೋಟರಿ ಸದ್ಯಸರು ಹಿರಿಯ ಉಪನ್ಯಾಸಕರಾದ ಮಹದೇವಸ್ವಾಮಿ ಹಾಗೂ ಕಾಲೇಜಿನ ವಿಧ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದ ಕಡೆಯಲ್ಲಿ ಕಾರ್ಯದರ್ಶಿ ಮಧುನಾರಾಯಣ ವಂದಿಸಿದರು.
No comments:
Post a Comment